ನಮ್ಮ ಬಗ್ಗೆ
ABOUT US
ಸುಪ್ರಜ-ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್
ಸಂಸ್ಥೆಯ ಪ್ರಾರಂಭದ ಬಗ್ಗೆ : ನಮ್ಮ ಸಂಸ್ಥೆಯು ಕರ್ನಾಟಕ ಸರ್ಕಾರದ ಅಂಗೀಕೃತ ಸಂಸ್ಥೆಯಾಗಿ 'ಕರ್ನಾಟಕ ಕೋ ಆಪರೇಟಿವ್ ಸೊಸೈಟೀಸ್ ಆಕ್ಟ್ 1959 ಮತ್ತು ನಿಯಮಗಳು 1960 ಅನ್ವಯ ಪರವಾನಗಿ (ಲೈಸೆನ್) ಪಡೆದು ನವೆಂಬರ್ 1997ರಲ್ಲಿ ಸ್ಥಾಪಿಸಲ್ಪಟ್ಟಿತ್ತು.
1997ರ ಪ್ರಾರಂಭದಲ್ಲಿ ಸೊಸೈಟಿ ಪ್ರಾರಂಭಿಸುವ ಉದ್ದೇಶದಿಂದ ನಿವೃತ್ತ ಬ್ಯಾಂಕ್ ಅಧಿಕಾರಿ ಶ್ರೀ ಎಂ. ಶಿವರುದ್ರಪ್ಪ ಮತ್ತು ವ್ಯಾಪಾರಿ ಹಾಗೂ ಕೈಗಾರಿಕೋದ್ಯಮಿಗಳಾದ ಶ್ರೀ ಎನ್.ಎಂ. ಶಿವಕುಮಾರ್‌ರವರು ಸೇರಿ ಮುಖ್ಯ ಪ್ರವರ್ತಕರುಗಳಾಗಿ ಕ್ರೆಡಿಟ್ ಸೊಸೈಟಿ ಪ್ರಾರಂಭಿಸುವ ಬಗ್ಗೆ ದೀರ್ಘವಾಗಿ ಚರ್ಚಿಸಿ, ಅಂದಿನ ಸಮಾಜದಲ್ಲಿ ಜನಾನುರಾಗಿಗಳು, ಸೇವಾ ಮನೋಭಾವ ಉಳ್ಳವರು.ನಿಸ್ವಾರ್ಥರು, ಹಾಗೂ ವಿಶ್ವಾಸಕ್ಕೆ ಆರ್ಹರೆನಿಸಿದ ಇತರ 16 ಪ್ರವರ್ತಕರುಗಳನ್ನು ಗುರುತಿಸಿ, ಒಂದು ಸಭೆ ನಡೆಸಿ, ಅವರುಗಳೊಂದಿಗೆ ಚರ್ಚಿಸಿ, "ಸುಪ್ರಜ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್" ಸಂಸ್ಥೆಯನ್ನು ಪ್ರಾರಂಭಿಸಲು ಕೆಳಕಂಡ ಎಲ್ಲಾ 18 ಪ್ರವರ್ತಕರುಗಳು ಸೇರಿ, ಕರ್ನಾಟಕ ಸರ್ಕಾರದ ಸಹಕಾರ ಇಲಾಖೆಗೆ ಅರ್ಜಿ ಸಲ್ಲಿಸಿದೆವು.
- ಶ್ರೀ ಎಂ. ಶಿವರುದ್ರಪ್ಪ
- ಶ್ರೀ ಎನ್.ಎಂ. ಶಿವಕುಮಾರ್
- ಶ್ರೀ ಹೆಚ್.ಎಸ್. ನಾಗರಾಜ್
- ಶ್ರೀ ಎಸ್. ಎನ್. ಮಹದೇವಯ್ಯ
- ಶ್ರೀ ಬಿ.ಎಂ. ರಾಜಶೇಖರಪ್ಪ
- ಶ್ರೀ ಎಂ. ಶಿವಶಂಕರ್
- ಶ್ರೀ ಎಸ್. ರೇಣುಕಾರಾಧ್ಯ
- ಶ್ರೀ ವಿ. ಪುಟ್ಟಪ್ಪ
- ಶ್ರೀ ಬಿ.ಆರ್. ನರಸಿಂಹಮೂರ್ತಿ
- ಶ್ರೀ ಎಂ. ಮಲ್ಲಪ್ಪ
- ಶ್ರೀ ಹೆಚ್.ವಿ. ವೀರೇಶ್
- ಶ್ರೀ ಸಿ. ಆರ್. ಸತ್ಯಮೂರ್ತಿ
- ಶ್ರೀಮತಿ ಮುಕ್ತಾ ಶಿವರುದ್ರಪ್ಪ
- ಶ್ರೀಮತಿ ತ್ರಿವೇಣಿ ಶಿವಕುಮಾರ್
- ಶ್ರೀಮತಿ ನಾಗವೇಣಿ
- ಶ್ರೀಮತಿ ಸುಮಿತ್ರಾ ಚಂದ್ರಶೇಖರ್
- ಶ್ರೀ ವೈ. ವಾಸುದೇವ
- ಶ್ರೀ ನಾರಾಯಣ
ಸಂಸ್ಥೆಯನ್ನು ಪ್ರಾರಂಭಿಸಿದ ಮುಖ್ಯ ಉದ್ದೇಶ- ಮಧ್ಯಮ ಹಾಗೂ ಉತ್ತಮ ವರ್ಗದ ನೆಂಟರಿಷ್ಟರು, ಸ್ನೇಹಿತರು ಹಾಗೂ ಸಾರ್ವಜನಿಕರುಗಳನ್ನು ಸಂಸ್ಥೆಯ ಸದಸ್ಯರನ್ನಾಗಿ ಮಾಡಿಕೊಂಡು ಷೇರು ಬಂಡವಾಳ ಪಡೆದು ಠೇವಣಿ ಮಾಡಲು, ಸಾಲ ಪಡೆಯಲು ಮತ್ತು ಕ್ರೆಡಿಟ್ ಸೊಸೈಟಿಯಿಂದ ಪ್ರಯೋಜನವಾಗುವ ಇತರೆ ಎಲ್ಲಾ ಸವಲತ್ತುಗಳನ್ನು ನೀಡುವುದು.
ನಮ್ಮ ಅರ್ಜಿಗೆ ಪ್ರತ್ಯುತ್ತರವಾಗಿ ಕರ್ನಾಟಕ ಸರ್ಕಾರ ಸಹಕಾರ ಇಲಾಖೆಯವರು ನಮಗೆ 1000 ಸದಸ್ಯರಿಂದ ರೂ. 10 ಲಕ್ಷಕ್ಕೆ ಕಡಿಮೆ ಇಲ್ಲದಂತೆ ಷೇರು ಬಂಡವಾಳ ಸಂಗ್ರಹಿಸಿ ಕರ್ನಾಟಕ ಕೋ-ಆಪರೇಟಿವ್ ಸೊಸೈಟೀಸ್ ಕಾಯಿದೆ 1959 ಹಾಗೂ ರೂಲ್ಸ್ಗಳನ್ನು 1960 ಪ್ರಕಾರ ಬೈಲಾಗಳೂ ಮತ್ತು ರೂಲ್ಸ್ಗಳನ್ನು ತಯಾರಿಸಿ ಅರ್ಜಿ ಸಲ್ಲಿಸುವಂತೆ ತಿಳಿಸಿದರು.
ಕೇವಲ 1 ತಿಂಗಳಿನ ಅವಧಿಯಲ್ಲಿ 600 ಜನ ಸದಸ್ಯರಿಂದ 25 ಲಕ್ಷ ಷೇರು ಬಂಡವಾಳ ಸಂಗ್ರಹಿಸಿ ಬೈಲಾಗಳೊಂದಿಗೆ ಸಂಸ್ಥೆ ಪ್ರಾರಂಭಿಸಲು ಅನುಮತಿ ಕೋರಿದಾಗ, ನಮ್ಮ ಅರ್ಜಿಯನ್ನು ಪರಿಗಣಿಸಿ ಸಂಸ್ಥೆ ಪ್ರಾರಂಭಿಸಲು ಪರವಾನಗಿ ನೀಡಿದರು.
ಸೊಸೈಟಿಯನ್ನು ಪ್ರಾರಂಭಿಸಲು, ಬೈಲಾಗಳನ್ನು ತಯಾರಿಸಲು ಹಾಗೂ ಪ್ರಥಮ ನಿರ್ದೇಶಕ ಮಂಡಳಿಯಲ್ಲಿ ಸೇರಿ ನಮಗೆ ಸಹಕಾರ ನೀಡಿದ ಕರ್ನಾಟಕ ಸರ್ಕಾರದ ನಿವೃತ್ತ ಹಿರಿಯ ಅಧಿಕಾರಿಗಳಾದ ಶ್ರೀ ಹೆಚ್. ಎಸ್. ನಾಗರಾಜ್, ಶ್ರೀ ಎಸ್.ಎನ್.ಮಹದೇವಯ್ಯ, ಶ್ರೀ ಬಿ.ಎಂ. ರಾಜಶೇಖರಪ್ಪ ಮತ್ತು ಶ್ರೀ ವಿ. ಪುಟ್ಟಪ್ಪನವರುಗಳ ನಿಸ್ವಾರ್ಥ ಸೇವೆ ಹಾಗೂ ನನ್ನ ಜೊತೆಗೂಡಿದ ಶ್ರೀ ಎನ್.ಎಂ. ಶಿವಕುಮಾರ್‌ರವರು ಹಾಗೂ ಇತರ ಎಲ್ಲಾ ಪ್ರವರ್ತಕರುಗಳು ಸೊಸೈಟಿಯ ಪ್ರಾರಂಭದಲ್ಲಿ ನೀಡಿದ ಸೇವೆ ಹಾಗೂ ಸಹಕಾರಗಳನ್ನು ಸ್ಮರಿಸದಿದ್ದರೆ ತಪ್ಪಾಗುತ್ತದೆ.
ಈ ರೀತಿ ಸರ್ಕಾರದಿಂದ ಅಂಗೀಕೃತಗೊಂಡ “ಸುಪ್ರಜ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್” ಸಂಸ್ಥೆಯು ದಿನಾಂಕ 10-11-1997ರಂದು ಚಿಕ್ಕಪೇಟೆಯಲ್ಲಿ ಒಂದು ಸೂಕ್ತವಾದ ಸ್ಥಳವನ್ನು ಬಾಡಿಗೆಗೆ ಪಡೆದು ಪ್ರಾರಂಭವಾಯಿತು.
ಅಂದಿನಿಂದ ಸೊಸೈಟಿಯು ಎಲ್ಲಾ ರೀತಿಯ ವ್ಯಾಪಾರ ವಹೀವಾಟುಗಳಲ್ಲಿ ಅಭಿವೃದ್ಧಿ ಹೊಂದುತ್ತಾ ಮುಂದುವರೆದ ವರ್ಷಗಳಲ್ಲಿ ಹೆಚ್ಚು ಹೆಚ್ಚು ಲಾಭಗಳಿಸುತ್ತ ಮುಂದುವರೆಯಿತು. ಸಂಸ್ಥೆಯು ಪ್ರಾರಂಭಗೊಂಡ 8 ವರ್ಷಗಳ ನಂತರ ಆಡಳಿತ ಮಂಡಳಿಗೆ ಸಂಸ್ಥೆಗೆ ವ್ಯಾಪಾರ ವಹಿವಾಟು ಹಗೂ ಇತರ ಆಡಳಿತಾತ್ಮಕ ವಿಷಯಗಳಲ್ಲಿ ಸ್ವಂತ ತೀರ್ಮಾನ ತೆಗೆದುಕೊಳ್ಳುವ ಅಂದರೆ, ನಿರ್ದೇಶಕ ಮಂಡಳಿಯು ವಾರ್ಷಿಕ ಲೆಕ್ಕ ಪರಿಶೋಧನೆಯನ್ನು ಸಹಕಾರ ಇಲಾಖೆ ಅಧಿಕಾರಿಗಳಿಗೆ ಕಾಯಿದೆ ಅಂಗೀಕೃತ ಲೆಕ್ಕಪರಿಶೋಧಕರಿಂದ ಶೀಘ್ರವಾಗಿ ಮಾಡಿಸಿಕೊಳ್ಳುವ ಪ್ರಯೋಜನ ಪಡೆಯಲು ಸೊಸೈಟಿಯನ್ನು ಸಹಕಾರಿಯಾಗಿ ಅಂದರೆ ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ ಹಾಗೂ ಕಾಯಿದೆಗಳ ಅನ್ವಯ “ಸುಪ್ರಜ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್ ಸಂಸ್ಥೆಯನ್ನಾಗಿ ಸರ್ಕಾರದ ಮಂಜೂರಾತಿ ಸಂಖ್ಯೆ ಜೆ.ಆರ್.ಬಿ.ಆರ್.ಜೆ.ಎನ್. ಸೌಕಾ:36:159:2005 2006 ಯಾಗಿ ನೋಂದಣಿಗೊಂಡು ಪರಿವರ್ತನೆಯಾಗಿರುತ್ತದೆ.
ನಂತರದ ವರ್ಷಗಳಲ್ಲಿ ಸಹಕಾರಿಯ ವ್ಯಾಪಾರ ವಹೀವಾಟುಗಳು ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು ಸದಸ್ಯರಿಗೆ ಉತ್ತಮ ಲಾಭಾಂಶ ನೀಡುತ್ತಾ ಬಂದಿದೆ. ಸಹಕಾರಿಯ ಆಡಳಿತ ಮಂಡಳಿಯಲ್ಲಿರುವ ಎಲ್ಲಾ ನಿರ್ದೇಶಕರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಾ ಸಹಕಾರಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.
2019-20 ಮತ್ತು 2020-21ನೇ ಸಾಲಿನ ಲೆಕ್ಕಪರಿಶೋಧಕರ ವರದಿ ಪ್ರಕಾರ ನಮ್ಮ ಸಹಕಾರಿಯ ವ್ಯಾಪಾರ ವಹಿವಾಟುಗಳನ್ನು "ಎ" ವರ್ಗ ನೀಡಿರುತ್ತಾರೆ ಮತ್ತು ನಮ್ಮ ಸಹಕಾರಿಯು ಸತತವಾಗಿ ಎಂಟನೇ ಸಾಲಿನಲ್ಲಿಯೂ ಸದಸ್ಯರಿಗೆ 25% ಲಾಭಾಂಶ ಘೋಷಿಸಿರುವುದು ಹಾಗೂ ಕಳೆದ 20 ತಿಂಗಳುಗಳಿಂದ ಇರುವ ಕೋವಿಡ್ ಪರಿಸ್ಥಿತಿಯಲ್ಲಿಯೂ ಸಹಕಾರಿಯು ಎಲ್ಲ ಸಿಬ್ಬಂದಿ ವರ್ಗದವರ ಪೂರ್ಣ ಸಹಕಾರದಿಂದ ಸದಸ್ಯರುಗಳಿಗೆ ಉತ್ತಮ ಸೇವೆ ನೀಡುತ್ತ ಬಂದಿರುವುದು ಹೆಮ್ಮೆಯ ವಿಷಯ
ಬೆಂಗಳೂರು
ಎಂ. ಶಿವರುದ್ರಪ್ಪ
ಅಧ್ಯಕ್ಷರು
ಸಾಲಗಳು & ಠೇವಣಿ ಬಡ್ಡಿ ದರಗಳು
DEPOSIT AND INTEREST RATES
ದಿನಾಂಕ 21.07.2023 ನಿರ್ದೇಶಕ ಮಂಡಳಿ ತೀರ್ಮಾನದಂತೆ ದಿನಾಂಕ 22.07.2023 ರಿಂದ ಠೇವಣಿ ನವೀಕರಣಕ್ಕೆ ಈ ಕೆಳಕಂಡಂತೆ ಬಡ್ಡಿದರ ನಿಗಧಿಪಡಿಸಲಾಗಿದೆ.
ಕ್ರಮ ಸಂಖ್ಯೆ | ಠೇವಣಿ ಅವಧಿ | ಬಡ್ಡಿ ದರ ಸಾಲಿಯಾನ ಶೇಕಡಾ | ಹಿರಿಯ ನಾಗರೀಕರಿಗೆ |
---|---|---|---|
1 | ಉಳಿತಾಯ ಠೇವಣಿ | 3.00% | 3.00% |
ಅವಧಿ ಠೇವಣಿ | |||
2 | 31 ರಿಂದ 90 ದಿನ ದಿವಸದವರೆಗೂ | 3.00% | 3.00% |
3 | 91 ದಿನದಿಂದ 364 ದಿನಗಳವರೆವಿಗೂ | 5.00% | 5.00% |
4 | 1 ವರ್ಷಕ್ಕೆ | 6.50% | 7.00% |
5 | 13 ತಿಂಗಳಿಂದ 24 ತಿಂಗಳಿಗೆ | 7.00% | 7.50% |
ದಿನಾಂಕ 19.08.2022ರ ನಿರ್ದೇಶಕ ಮಂಡಳಿ ಸಭೆಯ ತೀರ್ಮಾನದಂತೆ ಹೊಸದಾಗಿ ಪಡೆಯುವ ಸಾಲಗಳಿಗೆ ದಿನಾಂಕ 01.09.2022 ರಿಂದ ಈ ಕೆಳಕಂಡಂತೆ ಬಡ್ಡಿದರ ನಿಗಧಿಪಡಿಸಲಾಗಿದೆ.
ಕ್ರಮ ಸಂಖ್ಯೆ |
ಸಾಲದ ವಿಧಗಳು |
ಸಾಲದ ಮೊತ್ತ |
ಬಡ್ಡಿ ದರಗಳು (ಸಾ.ಶೇ). |
ವಾಯಿದೆ ದಿನಾಂಕದೊಳಗಾಗಿ ಅಸಲು ಕಂತು ಪಾವತಿಸಿದರೆ ಬಡ್ಡಿಯ ದರದಲ್ಲಿ ಸಾ.ಶೇ. 2% ರಿಯಾಯಿತಿ |
ಬಡ್ಡಿ ದರಗಳು (ಸಾ.ಶೇ).ವಾಯಿದೆ ದಿನಾಂಕದೊಳಗಾಗಿ ಅಸಲು ಕಂತು ಪಾವತಿಸಿದರೆ. ಬಡ್ಡಿಯ ದರ ಸಾ.ಶೇ. |
---|---|---|---|---|---|
1 | ಗೃಹ ನಿರ್ಮಾಣ /ಖರೀದಿ ಸಾಲ |
1 ಲಕ್ಷ ಮೇಲ್ಪಟ್ಟು | 12.00% | 2.00% | 10.00% |
2 | ವ್ಯಾಪಾರ ಸಾಲ | 1 ಲಕ್ಷ ಮೇಲ್ಪಟ್ಟು | 12.00% | 2.00% | 10.00% |
3 | ಅಡಮಾನ ಸಾಲ | 1 ಲಕ್ಷ ಮೇಲ್ಪಟ್ಟು | 12.00% | 2.00% | 10.00% |
4 | ವಿವಾಹ ಸಾಲ | 1 ಲಕ್ಷ ಮೇಲ್ಪಟ್ಟು | 12.00% | 2.00% | 10.00% |
5 | ವೈಯುಕ್ತಿಕ ಸಾಲ | 50000/- | 17.00% | 2.00% | 15.00% |
6 | ವಾಹನ ಸಾಲ | 20 ಲಕ್ಷದವರೆಗೆ | 12.00% | ||
7 | ಚಿನ್ನಾಭರಣ ಸಾಲ | 10 ಲಕ್ಷದವರೆಗೆ | 10.00% | ||
8 | ವಿದ್ಯಾಭ್ಯಾಸ ಸಾಲ | 25 ಲಕ್ಷದವರೆಗೆ | 10.00% |
ನಿರ್ದೇಶಕರ ಮಂಡಳಿ
(14/02/2021 - 13/02/2026)
BOARD OF DIRECTORS


Shri M.ShivarudrappaPresident


Shri B.R.JayadevaVice-President


Shri T.V.T Prakash Director


Shri N.N.KantharajDirector


Shri M.MaheshDirector


Smt M.S.VeenaDirector


Shri N.SudhamaDirector


Shri M.RajendranDirector


Shri M.MallikarjunaDirector


Smt. Muktha ShivarudrappaDirector


Shri B.V.Prasanna KumarDirector


Shri S.C.Jayakumar
Director

Shri K.N.Venkataram
Directorನಮ್ಮ-ತಂಡ
OUR STAFF


Shri Narasimha MurthyChief Executive Officer


Shri M.S.JagadishManager


Smt M.C.PallaviSystem Administrator


Shri ThopegowdaSenior Assistant / Head Cashier


Smt C.H.JayalakshmiJunior Assistant / Comp Operator


Shri Gangadhara MurthyAttender / Loan Recovery Staff

